"ಮುಖದ ಹೊಳಪನ್ನು ಹೆಚ್ಚಿಸುವ ಸುಲಭ ಮಾರ್ಗಗಳು, Beauty Tips| Home Made Face Mask"

"ಮುಖದ ಹೊಳಪನ್ನು ಹೆಚ್ಚಿಸುವ ಸುಲಭ ಮಾರ್ಗಗಳು, Beauty Tips| Home Made Face Mask"




ನಮ್ಮ ಮುಖದ ಕಾಂತಿಯನ್ನು ನೈಸರ್ಗಕವಾಗಿ ಮತ್ತು ಆರೋಗ್ಯವಾಗಿ ಹೊಳೆಯುವಂತೆ ಮಾಡುವುದು ನಮಗೆ ಇರುವ ದೊಡ್ಡ ಚಾಲೆಂಜ್.ಈ ಸಮಸ್ಯೆಗೆ ಒಂದು ಚಿಕ್ಕದಾದ ಪರಿಹಾರ ಕೊಡಲು ಇಚ್ಚಿಸುತ್ತೇವೆ.ನಾವು ನಮ್ಮ ಮನೆಯಲ್ಲಿಯೇ ಇರುವ ಮೊಟ್ಟೆ ಮತ್ತು ಕಡಲೆಹಿಟ್ಟನ್ನು ಬಳಸಿಕೊಂಡು home made face mask ಮಾಡುವುದು ಹೇಗೆ ಎಂದು ಕೆಳಗಡೆ ವಿವರಿಸಿದ್ದೇನೆ.

1. ಮೊದಲು ನಿಮ್ಮ ಮುಖವನ್ನು ಸ್ವಚ್ಛವಾದ ನೀರಿನಿಂದ ತೊಳೆಯಿರಿ. ನಂತರ ಸ್ವಚ್ಛ ವಾದ ಬಟ್ಟೆಯಿಂದ ಮುಖವನ್ನು ಒರೆಸಿ.
2. ನಂತರ ಒಂದು ಚಿಕ್ಕ ತಟ್ಟೆಗೆ egg white ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅದಾದ ನಂತರ ಅದಕ್ಕೆ ಸ್ವಲ್ಪ ಕಡಲೆ ಹಿಟ್ಟನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ.
3. ನಂತರ ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ ಅದರ ಮೇಲೆ tissue paper ನ್ನು ಅಂಟಿಸಿ.ಮತ್ತೆ ಅದರ ಮೇಲೆ ತೆಳುವಾಗಿ ಮಿಕ್ಸ್ ಮಾಡಿದ ಮಿಶ್ರಣ ವನ್ನು ಹಚ್ಚಿ. ಮುಖ ಪೂರ್ತಿಯಾಗಿ ಒಣಗುವ ವರೆಗೆ ಬಿಡಿ ..ನಂತರ ಮುಖದಿಂದ ಮಾಸ್ಕ್ ನ್ನು ಪೀಲ್ ಮಾಡಿ ತೆಗೆಯಿರಿ.. ಪೂರ್ತಿಯಾಗಿ ತೆಗೆದ ನಂತರ ನೀರಿನಿಂದ ಮುಖವನ್ನು ತೊಳೆಯಿರಿ. ನಂತರ ನೀವು ಮುಖದಲ್ಲಿ ಆಗುವಂತ ಬದಲಾವಣೆ ಗಳನ್ನು ಗಮನಿಸಬಹುದು.

ಮುಖದ ಮೇಲೆ ಆಗುವಂತಹ ಬದಲಾವಣೆಗಳು.
1. ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.
2. ಮುಖವನ್ನು ಮೃದುವಾಗಿಸುತ್ತದೆ .
3. ಕಪ್ಪು ಕಳೆಗಳು  ಕಡಿಮೆಯಾಗುತ್ತದೆ.
4. ಒಣ ಚರ್ಮ ವನ್ನ ತೆಗೆಯುತ್ತದೆ.
5. Whiteheads ಮತ್ತು Blackheads ತೆಗೆಯುತ್ತದೆ.

ಇದನ್ನು ವಾರದಲ್ಲಿ ಒಂದು ಬಾರಿ ಮಾಡುವುದರಿಂದ ನಿಮ್ಮ ತ್ವಚೆ ನೈಸರ್ಗಿಕವಾಗಿ ಮತ್ತು ಆರೋಗ್ಯವಾಗಿರುತ್ತದೆ.








No comments

Powered by Blogger.